ರಕ್ಷಿತ್ ಶೆಟ್ಟಿ ಒಬ್ಬ ಕನ್ನಡ ಚಲನಚಿತ್ರ ನಟ. ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯ()ದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ಪದವಿ ಪಡೆದ ನಂತರ, ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸಮಾಡಿದರು. == ವೈಯಕ್ತಿಕ ಜೀವನ == ರಕ್ಷಿತ್ ಶೆಟ್ಟಿಯವರು ಜೂನ್ ೬, ೧೯೮೩ ರಂದು ಉಡುಪಿಯಲ್ಲಿ ತುಳು ಮಾತನಾಡುವ ಬಂಟ್ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಊರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ತಮ್ಮ ಶಾಲಾ ದಿನಗಳಲ್ಲಿ ಅವರು ತುಳುನಾಡು ಪ್ರದೇಶದ ಜಾನಪದ ನೃತ್ಯವಾದ ಪಿಲಿ ನಲಿಕೆ ನೃತ್ಯಗಾರರಾಗಿದ್ದರು. ಇದು ಅವರ ೨೦೧೪ ರ ಚಿತ್ರ ಉಳಿದವರು ಕಂಡಂತೆ ಚಿತ್ರದಲ್ಲಿನ ನೃತ್ಯಗಾರರಿಗೆ ಪ್ರಮುಖ ಪಾತ್ರವನ್ನು ಒದಗಿಸಿತು. == ವೃತ್ತಿ ಜೀವನ == ಶೆಟ್ಟಿ ಅವರ ಚೊಚ್ಚಲ ಚಿತ್ರ ೨೦೧೦ರಲ್ಲಿ ಬಿಡುಗಡೆಯಾದ ನಮ್ ಏರಿಯಾಲ್ ಒಂದಿನ. ೨೦೧೩ರ ಪ್ರಣಯ ಮತ್ತು ಹಾಸ್ಯ ಕಥೆಯುಳ್ಳ ಸಿಂಪಲ್ಲಾಗ್ ಒಂದ್ ಲವ್‍ ಸ್ಟೋರಿ ಪ್ರೇಕ್ಷಕರ ಪ್ರಶಂಸೆಗೊಳಪಟ್ಟಿತು. ನಂತರ ೨೦೧೪ರಲ್ಲಿ ಅವರು ನಿರ್ದೇಶಿಸಿ ನಟಿಸಿದ ಕ್ರೈಂ-ಡ್ರಾಮಾ ಚಿತ್ರ ಉಳಿದವರು ಕಂಡಂತೆ ಚಿತ್ರ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆ ಪಡೆಯಿತು. ಈ ಚಿತ್ರವು ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕನಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕನಾಗಿ (ದಕ್ಷಿಣ) ಫಿಲಂಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟಿತು. ನಂತರ ಅವರು ವಾಸ್ತು ಪ್ರಕಾರ (೨೦೧೫) ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬) ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದರು. ಶೆಟ್ಟಿಯವರಿಗೆ ತಮ್ಮ ಮುಂದಿನ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸುಗಳಿಸಿಕೊಟ್ಟದ್ದು, ತಾವೇ ಬರೆದು ನಿರ್ಮಿಸಿದ ೨೦೧೬ರ ಹಾಸ್ಯಪ್ರಧಾನ ಚಿತ್ರ ಕಿರಿಕ್ ಪಾರ್ಟಿಆಗಿದೆ. ಪವನ್ ಕುಮಾರ್, ಅನುಪ್ ಭಂಡಾರಿ ಹಾಗೂ ಇತರ ನಿರ್ದೇಶಕರೂ ಸೇರಿದಂತೆ ಶೆಟ್ಟಿಯವರಿಗೆ ಕನ್ನಡ ಸಿನಿಮಾ ವಲಯದಲ್ಲಿ ಹೊಸ ಸಿನಿಮಾ ಸಂಚಲನವನ್ನು ಸೃಷ್ಟಿಸಿದ ಮನ್ನಣೆಯಿದೆ. ಇದು ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಸೃಷ್ಟಿಸಿದೆ. == ಚಲನಚಿತ್ರಗಳ ಪಟ್ಟಿ == == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == === ಪ್ರಶಸ್ತಿಗಳು === == ಉಲ್ಲೇಖಗಳು ==